# started 2014-08-16T14:15:41Z "ವಿಜಯ ದಶಮಿ - ನವರಾತ್ರಿ ಉತ್ಸವದ ಕಡೆಯ ದಿನ. ಈ ದಿನದಂದು ಪಾಂಡವರು ಶತ್ರುಗಳ ಮೇಲೆ ಜಯ ಸಾಧಿಸಿದ ದಿನವೆಂದು ಹೇಳಲಾಗುತ್ತದೆ. ಹೆಸರೇ ಹೇಳುವಂತೆ ಇದು ದಶಮಿ - ಹತ್ತನೆಯ ದಿನ ಅಂದರೆ ದಸರಾ ಉತ್ಸವದ ಹತ್ತನೆಯ ದಿನ. 'ದಶ ಅಹರ್' -> ದಶಹರ -> ದಶರಾ -> ದಸರಾ ಎಂದೇ ಪ್ರಸಿದ್ಧವಾಗಿರುವ ಶಕ್ತಿಪೂಜೆಯ ಶರನ್ನವರಾತ್ರಿಗಳ ನಂತರದ ವಿಜಯೋತ್ಸವದ ದಿನ. ಚಾಂದ್ರಮಾನ ರೀತಿಯಲ್ಲಿ ಹೇಳುವುದಾದರೆ ಶರದೃತುವಿನ ಆಶ್ವಯುಜ ಮಾಸ ಶುಕ್ಲಪಕ್ಷದ ಹತ್ತನೆಯ ದಿನ. 'ದಶಹರ'ದಂದು ದಶಕಂಠ ರಾವಣನನ್ನು ಶ್ರೀರಾಮನು ಸಂಹರಿಸಿದ ವಿಜಯೋತ್ಸವವೆಂದೂ ಪ್ರತೀತಿಯಿದೆ. ಉತ್ತರಭಾರತದ ಕೆಲವೆಡೆ ಈ ದಿನವನ್ನು ಹೊಸವರ್ಷದ ದಿನವೆಂದು ಆಚರಿಸುವ ಪದ್ಧತಿಯೂ ಇದೆ."@kn . "ಕೂಡ್ಲಿ (ಕೂಡಲಿ) ಶಿವಮೊಗ್ಗ ಜಿಲ್ಲೆಯ ಒಂದು ಪುಟ್ಟ ಊರು. ಈ ಊರು ಭಾರತ ದೇಶದ ಕರ್ನಾಟಕ ರಾಜ್ಯಕ್ಕೆ ಸೇರುತ್ತದೆ.ತುಂಗಾ ಮತ್ತು ಭದ್ರಾ - ನದಿಗಳು, ಬೇರೆ ಬೇರೆಯಾಗಿ ಉಗಮಿಸಿ, ಕೂಡ್ಲಿ (ಕೂಡಲಿ) ಎಂಬಲ್ಲಿ ಈ ಜೀವನದಿಗಳ ಸಂಗಮವಾಗುತ್ತವೆ. ಈ ಊರು ತುಂಗಭದ್ರಾ ನದಿಗೆ ಜನ್ಮ ನೀಡುವ ಸ್ಥಳ."@kn . "ಕನ್ನಡ ಅಕ್ಷರಮಾಲೆಯು ಬ್ರಾಹ್ಮಿ ಲಿಪಿಯಿಂದ ಬೆಳೆದು ಬಂದಿದೆ. ಇದನ್ನು ಸ್ವರಗಳು, ಅನುಸ್ವಾರ, ವಿಸರ್ಗ, ವ್ಯಂಜನಗಳು, ಅವರ್ಗೀಯ ವ್ಯಂಜನಗಳೆಂದು ವಿಭಾಗಿಸಲಾಗಿದೆ. ಕನ್ನಡ ಅಕ್ಷರಮಾಲೆಯನ್ನು ಕನ್ನಡ ವರ್ಣಮಾಲೆಯೆಂದೂ ಕರೆಯಲಾಗುತ್ತದೆ."@kn . "'Bold textಟಿಪ್ಪು ಸಾಹಿಬ್ ಎಂದೂ ಕರೆಯಲ್ಪಡುತ್ತಿದ್ದ ಟೀಪು ಸುಲ್ತಾನ್ (೧೭೫೩ - ಮೇ ೪, ೧೭೯೯), ೧೭೮೨ ರಿಂದ ಮೈಸೂರು ಸಂಸ್ಥಾನದ ರಾಜ, ಹಾಗೂ ಭಾರತದಲ್ಲಿ ಬ್ರಿಟೀಷ್ ಸಾಮ್ರಾಜ್ಯಶಾಹಿಯ ವಿರುದ್ಧ ಆಗಿನ ಕಾಲದ ಪ್ರಮುಖ ಹೋರಾಟಗಾರರಲ್ಲಿ ಒಬ್ಬ. ಈ ಹೋರಾಟದ ಪರಿಣಾಮವಾಗಿ ಟೀಪುವಿಗೆ ಶೇರ್-ಎ-ಮೈಸೂರ್ (ಮೈಸೂರ ಹುಲಿ) ಎಂಬ ಬಿರುದು ಉಂಟು.ಟೀಪು ಸೇನಾ ತಂತ್ರಗಳನ್ನು ತನ್ನ ತಂದೆ, ಹೈದರಾಲಿಯೊಂದಿಗೆ ಇದ್ದ ಫ್ರೆಂಚ್ ಅಧಿಕಾರಿಗಳಿಂದ ಪಡೆದನು. ೧೭೬೭ ರ ಕರ್ನಾಟಕ ಯುದ್ಧದಲ್ಲಿ ಒಂದು ಅಶ್ವದಳದ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದನು. ಸೇನಾನಾಯಕನಾಗಿ ಟೀಪು ಪ್ರಸಿದ್ದಿ ಪಡೆದದ್ದು ೧೭೭೫-೭೯ ರ ಆಂಗ್ಲೋ-ಮರಾಠಾ ಯುದ್ಧದಲ್ಲಿ. ೧೫ ನೆ ವಯಸ್ಸಿನಲ್ಲಿ ತನ ತಂದೆ ಹೈದರಾಲಿಯ ಜೊತೆ ಪ್ರಥಮ ಮೈಸೂರು ಯುದ್ಧದಲ್ಲಿ ಭಾಗವಹಿಸಿ, ಒಂದು ದೊಡ್ಡ ಸೇನಾ ತುಕಡಿಯ ನಾಯಕನಾಗಿ ೧೭೮೨ ರ ಫೆಬ್ರವರಿಯಲ್ಲಿ ಆಂಗ್ಲ ಸೇನಾನಾಯಕ ಬ್ರಾತ್‍ವೈಟ್‍ನನ್ನು ಸೋಲಿಸಿದನು.ಎರಡನೇ ಮೈಸೂರು ಯುದ್ಧ :ಐದು ವರ್ಷಗಳ ನಂತರ ಎರಡನೇ ಮೈಸೂರು ಯುದ್ಧ ಆರಂಭವಾಯಿತು. ಈ ಯುದ್ಧದಲ್ಲಿ ಬ್ರಿಟಿಷರು ಸೋತರೂ ಅವರಿಂದ ಭಾರತದ ಸ್ವಾತಂತ್ರ್ಯಕ್ಕಿರುವ ಅಪಾಯವನ್ನು ಟೀಪು ಮನಗಂಡನು. ೧೭೮೨ ರಲ್ಲಿ ಹೈದರಾಲಿಯ ನಿಧನದ ನಂತರ ಟೀಪು ಸುಲ್ತಾನನಾದ ಮೇಲೆ ಬ್ರಿಟಿಷರ ಮುನ್ನಡೆಯನ್ನು ತಡೆಯಲು ಅನೇಕ ಮೈತ್ರಿತ್ವಗಳನ್ನು ಸ್ಥಾಪಿಸಲು ಹೆಣಗಿದ. ಮೊದಲು ಮರಾಠರೊಂದಿಗೆ ಹಾಗೂ ಮೊಘಲ್ ಸಾಮ್ರಾಜ್ಯದೊಂದಿಗೆ ಮೈತ್ರಿತ್ವವನ್ನು ಏರ್ಪಡಿಸಿದ. ಆದರೆ ಈ ಮೈತ್ರಿತ್ವಗಳು ವಿಫಲವಾದಾಗ ಯೂರೋಪ್‌ನಲ್ಲಿ ‍ ಬೆಳೆಯುತ್ತಿದ್ದ ಏಳುವರ್ಷಗಳ ಯುದ್ಧದ ಪರಿಣಾಮವಾಗಿ ಸ್ವಲ್ಪ ದುರ್ಬಲವಾಗಿದ್ದ ಫ್ರಾನ್ಸ್‌ನತ್ತ ಟೀಪು ತಿರುಗಿದನು. ಈ ಮೈತ್ರಿತ್ವದಿಂದ ಅವನು ಪಡೆದದ್ದಕ್ಕಿಂತಲೂ ಹೆಚ್ಚು ನೆರವನ್ನು ನಿರೀಕ್ಷಿಸಿ ೧೭೮೯ ರಲ್ಲಿ ಬ್ರಿಟಿಷರ ಕೈಯಲ್ಲಿದ್ದ ಟ್ರಾವಂಕೋರ್ ರಾಜ್ಯದ ಮೇಲೆ ಆಕ್ರಮಣ ನಡೆಸಿದ; ಮೂರನೇ ಮೈಸೂರು ಯುದ್ಧ :ಇದರ ಪರಿಣಾಮ ಮೂರನೇ ಮೈಸೂರು ಯುದ್ಧ - ಇದರಲ್ಲಿ ಮೈಸೂರು ಸಂಸ್ಥಾನ ಬಲವಾಗಿ ಸೋತಿತು; ಇದೇ ಸಮಯದಲ್ಲಿ ಫ್ರಾನ್ಸ್ ದೇಶದಲ್ಲಿ ಕ್ರಾಂತಿ ಆರಂಭವಾಗಿ ಫ್ರಾನ್ಸ್ ದೇಶವು ಟೀಪುವಿನ ನೆರವಿಗೆ ಬರಲಾಗಲಿಲ್ಲ. ನಾಲ್ಕನೇ ಮೈಸೂರು ಯುದ್ಧ :ಟೀಪುವಿನ ಮರಣ ನಾಲ್ಕನೇ ಮೈಸೂರು ಯುದ್ಧದ ಸಮಯದಲ್ಲಿ ನಡೆಯಿತು. ೧೭೯೮ ರಲ್ಲಿ ನೆಪೋಲಿಯನ್ ಈಜಿಪ್ಟ್ ವರೆಗೆ ಬಂದಿಳಿದದ್ದು ಮುಂದಕ್ಕೆ ಭಾರತದಲ್ಲಿ ಬ್ರಿಟಿಷರ ಮೇಲೆ ಆಕ್ರಮಣ ನಡೆಸಲು, ಮತ್ತು ಇದರ ಮುಂದಿನ ಹೆಜ್ಜೆ ಮೈಸೂರು ಸಂಸ್ಥಾನವಾಗಿದ್ದಿತು. ನೈಲ್ ಯುದ್ಧದಲ್ಲಿ ಆಂಗ್ಲ ಅಧಿಕಾರಿ ಹೊರೇಷಿಯೋ ನೆಲ್ಸನ್ ನೆಪೋಲಿಯನ್‌ನ ಕನಸನ್ನು ತಡೆದರೂ ಸಹ, ಮೂರು ಸೇನಾ ತುಕಡಿಗಳು - ಮುಂಬಯಿಯಿಂದ ಒಂದು ಮತ್ತು ಇನ್ನೆರಡು ಆಂಗ್ಲ ತುಕಡಿಗಳು (ಆರ್ಥರ್ ವೆಲ್ಲೆಸ್ಲಿ ಮತ್ತು ಡ್ಯೂಕ್ ಆಫ್ ವೆಲ್ಲಿಂಗ್ಟನ್ ನ ನೇತೃತ್ವದಲ್ಲಿ) ಮೈಸೂರಿನತ್ತ ಹೆಜ್ಜೆ ಇಟ್ಟವು. ರಾಜಧಾನಿಯಾದ ಶ್ರೀರಂಗಪಟ್ಟಣ ಕ್ಕೆ ೧೭೯೯ ರಲ್ಲಿ ಈ ತುಕಡಿಗಳು ಮುತ್ತಿಗೆ ಇಟ್ಟವು. ಮೇ ೪ ರಂದು ಈ ಸೇನೆಗಳು ಕೋಟೆ ಗೋಡೆಗಳನ್ನು ಭೇದಿಸಿ ಒಳಗೆ ನುಗ್ಗುತ್ತಿದ್ದಾಗ ಮುನ್ನುಗ್ಗಿದ ಟೀಪು ಮೃತನಾದ. ಟೀಪು ಸೃಷ್ಟಿಸಿದ ಒಂದು ಮುಖ್ಯ ಸೇನಾ ಪ್ರಗತಿಯೆಂದರೆ ರಾಕೆಟ್‍ಗಳ ಮೂಲಕ ದೊಡ್ಡ ಮಟ್ಟದ ಆಕ್ರಮಣವನ್ನು ನಡೆಸುವುದು. ಮೂರನೇ ಹಾಗೂ ನಾಲ್ಕನೇ ಮೈಸೂರು ಯುದ್ಧಗಳಲ್ಲಿ ಇವುಗಳ ಬಳಕೆಯ ಪರಿಣಾಮವಾಗಿ ಆಂಗ್ಲರು ಸಹ ಇವನ್ನು ಬಳಕೆಗೆ ತಂದರು. ಅನೇಕ ಚರಿತ್ರಜ್ಞರ ವಿಮರ್ಶೆಯ ಪ್ರಕಾರ ಟೀಪುವಿನ ಆಡಳಿತ ಜಾತ್ಯತೀತ ಹಾಗೂ ಸ್ವಾತಂತ್ರ್ಯಪೂರ್ಣ ಆದರ್ಶಗಳನ್ನು ಹೊಂದಿದ್ದಿತು. ಟೀಪುವಿನ ಜೀವನದ ಒಂದು ಆಸಕ್ತಿಕರ ಅಂಶವೆಂದರೆ ಅವನು ಜಾಕೊಬಿನ್ ಕ್ಲಬ್ ನ ಸಂಸ್ಥಾಪಕರಲ್ಲಿ ಒಬ್ಬನು. ಅದರ ಸದಸ್ಯತ್ವವನ್ನು ಸ್ವೀಕರಿಸುವಾಗ ಫ್ರಾನ್ಸ್‌ ಬಗ್ಗೆ ಮಾಡಿದ ಭಾಷಣದಲ್ಲಿ ಈ ಮಾತುಗಳಿದ್ದವು:\"ನಿಮ್ಮ ದೇಶದ ಸಂಸ್ಕೃತಿಯನ್ನು ನಾನು ಮೆಚ್ಚುತ್ತೇನೆ; ನಿಮ್ಮ ದೇಶ ನನಗೆ ಪ್ರಿಯವಾದದ್ದು, ಮತ್ತು ನಾನು ಅದರ ಮಿತ್ರ. ನಿಮ್ಮ ದೇಶ ಎಂದಿಗೂ ನನ್ನ ದೇಶದಲ್ಲಿ ಸಹಕಾರ ಕಾಣುತ್ತದೆ, ನನ್ನ ದೇಶಕ್ಕೆ ಇಲ್ಲಿ ಸಹಕಾರ ದೊರೆತಿರುವಂತೆ, ನನ್ನ ದೇಶದ ತಂಗಿ!\"ನಾಗರಿಕ ಟೀಪು ಸುಲ್ತಾನ್ :ಟೀಪು ತನ್ನನ್ನು ನಾಗರಿಕ ಟೀಪು ಸುಲ್ತಾನ್ ಎಂದು ಕರೆದುಕೊಳ್ಳುತ್ತಿದ್ದ. ಆ ಕಾಲದ ಇತರ ಯಾವುದೇ ಸಮಾಜಶಾಹಿ ಅಥವಾ ಸ್ವಾತಂತ್ರ್ಯಪೂರ್ಣ ವಿಚಾರಗಳನ್ನು ಒಪ್ಪದ ರಾಜರ ಅಭಿಪ್ರಾಯಗಳಿಗೆ ಇದು ಸಂಪೂರ್ಣ ವಿರುದ್ಧವಾದದ್ದು."@kn . "ಭಾರತದ ರಾಷ್ಟ್ರಗೀತೆ - ನೊಬೆಲ್ ಪ್ರಶಸ್ತಿ ವಿಜೇತ ಕವಿ ರವೀಂದ್ರನಾಥ ಠಾಗೋರ್ ಬರೆದ ಗೀತೆ.ಅವರು ಸಂಸ್ಕೃತ ಮಿಶ್ರಿತ ಬಂಗಾಳಿಯಲ್ಲಿಬರೆದ ಬ್ರಹ್ಮೋ ಮಂತ್ರದ ಮೊದಲ ೫ ಪ್ಯಾರಾಗಳನ್ನೇ ನಾವೀಗ ಹಾಡುತ್ತಿರುವುದು..ಈ ಗೀತೆಯನ್ನು ಜನವರಿ ೨೪,೧೯೫೦ರಲ್ಲಿ ಭಾರತ ಸರಕಾರವು ರಾಷ್ಟ್ರಗೀತೆ ಎಂದು ಘೋಷಿಸಿತು,ಇದಕ್ಕೆ ಸಂಗೀತ ಅಳವಡಿಸಿದ್ದು ರಾಮ್ ಸಿಂಗ್ ರಾಕೂರ್. ರಾಷ್ಟ್ರಗೀತೆಯನ್ನು ರಾಷ್ಟ್ರ ದ್ವಜವನ್ನು ಹಾರಿಸಿದ ನಂತರ ೫೨ ಸೆಕೆಂಡುಗಳಿಗೆ ಮೀರದಂತೆ ಹಾಡಿ ಮುಗಿಸಬೇಕು.ರಾಷ್ಟ್ರಗೀತೆ ಹಾಡುವಾಗ ಎಲ್ಲರೂ ಎದ್ದು ನಿಂತು ಭಾರತ ಮಾತೆಗೆ ವಂದಿಸಬೇಕು,ರಾಷ್ಟ್ರಗೀತೆ ಹಾಡುವುದನ್ನು ಅಡ್ಡಿಪಡಿಸಿದರೆ ನಮ್ಮ ಕಾನೂನಿನಲ್ಲಿ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲ್ಪಡುತ್ತದೆ. ಭಾರತದ ರಾಷ್ಟ್ರೀಯ ಗಾನ - ವಂದೇ ಮಾತರಮ್ . ಭಾರತದ ರಾಷ್ಟ್ರಗೀತೆ \"ಜನ ಗಣ ಮನ\".. ಕನ್ನಡದಲ್ಲಿ ಈ ಮುಂದಿನಂತಿದೆ:ಜನ-ಗಣ-ಮನ-ಅಧಿನಾಯಕ ಜಯ ಹೇ, ಭಾರತ-ಭಾಗ್ಯ-ವಿಧಾತಾ ಪಂಜಾಬ ಸಿಂಧ ಗುಜರಾತ ಮರಾಠಾ, ದ್ರಾವಿಡ ಉತ್ಕಲ ಬಂಗ ವಿಂಧ್ಯ ಹಿಮಾಚಲ ಯಮುನಾ ಗಂಗಾ, ಉಚ್ಛಲ ಜಲಧಿ ತರಂಗ ತವ ಶುಭ ನಾಮೇ ಜಾಗೇ, ತವ ಶುಭ ಆಶಿಶ ಮಾಗೇ ಗಾಹೇ ತವ ಜಯ ಗಾಥಾ ಜನ-ಗಣ-ಮಂಗಲ-ದಾಯಕ ಜಯ ಹೇ, ಭಾರತ-ಭಾಗ್ಯ-ವಿಧಾತಾ ಜಯ ಹೇ, ಜಯ ಹೇ, ಜಯ ಹೇ ಜಯ, ಜಯ, ಜಯ, ಜಯ ಹೇ ರಾಷ್ಟ್ರಗೀತೆಯ ಕನ್ನಡ ಭಾವಾನುವಾದ:-\"ಜನ ಸಮುಹದ ಮನಸ್ಸಿಗೆ ಒಡೆಯನಾದಸರ್ವೋಚ್ಚನಾಯಕನೇ ಭಾರತದ ಅದೃಷ್ಟವನ್ನುದಯಪಾಲಿಸುವವನೇ ನಿನಗೆ ಜಯವಾಗಲಿಪಂಜಾಬ,ಸಿಂಧು,ಗುಜರಾತ,ಮಹಾರಾಷ್ಟ್ರ,ದಕ್ಷಿಣಭಾರತ,ಒರಿಸ್ಸಾ,ಬಂಗಾಳ,ಹೀಗೆ ಭಾರತದ ನಾಲ್ಕೂ ದಿಕ್ಕಿನ ಪ್ರಾಂತ್ಯಗಳು ವಿಂದ್ಯ,ಹಿಮಾಚಲ ಪರ್ವತಗಳು ಹಾಗೇ ಗಂಗಾ,ಯಮುನೆಯಂತಹ,ಜೀವನದಿಗಳು ಶ್ರೇಷ್ಠವಾದಸಮುದ್ರದ ನೀರಿನ ಅಲೆಗಳು ನಿನ್ನ ಮಂಗಳಕರವಾದ ಹೆಸರನ್ನು ಕೇಳಿ ಜಾಗ್ರತಗೊಳ್ಳುತ್ತವೆನಿನ್ನ ಮಂಗಳಕರವಾದ ಆಶೀರ್ವಚನವನ್ನು ಕೇಳಿಕೊಳ್ಳುತ್ತಾ ನಿನ್ನ ಗೆಲುವಿನ ಗೀತೆಯನ್ನು ಹಾಡುತ್ತಿವೆಜನ ಸಮೂಹಕ್ಕೆ ಒಳ್ಳೆಯದನ್ನು ಅನುಗ್ರಹಿಸವವನೇ ನಿನಗೆ ಜಯವಾಗಲಿ,ಜಯವಾಗಲಿ.ಭಾರತದ ಭಾಗ್ಯವನ್ನು ಕರುಣಿಸುವವನೇ ನಿನಗೆ ಜಯವಾಗಲಿ.\"\"ನಮನ\""@kn . "ಪ್ರೊ|| ಜಿ ವೆಂಕಟಸುಬ್ಬಯ್ಯ ಕನ್ನಡದ ಏಳಿಗೆಗಾಗಿ ದುಡಿದವರು, ದುಡಿಯುತ್ತಿರುವವರು. ಬೆಂಗಳೂರಿನ ಇವರು ಕನ್ನಡದ ನಿಘಂಟುಶಾಸ್ತ್ರ, ಪ್ರಾಚೀನ ಸಾಹಿತ್ಯ ಅಧ್ಯಯನ, ಅನುವಾದ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ. ಇವರ 'ಇಗೋ ಕನ್ನಡ' ಎಂಬ ಪ್ರಜಾವಾಣಿ ಅಂಕಣ ಸಮಸ್ತ ಕನ್ನಡಿಗರಿಗೆ ಪರಿಚಿತವಾಗಿರುವ ಅಂಕಣ. ೧೯೯೧ ರಿಂದ ತೊಡಗಿ ವೆಂಕಟಸುಬ್ಬಯ್ಯನವರು ಈ ಅ