# started 2014-08-16T14:15:28Z "ವಿಜಯ ದಶಮಿ - ನವರಾತ್ರಿ ಉತ್ಸವದ ಕಡೆಯ ದಿನ. ಈ ದಿನದಂದು ಪಾಂಡವರು ಶತ್ರುಗಳ ಮೇಲೆ ಜಯ ಸಾಧಿಸಿದ ದಿನವೆಂದು ಹೇಳಲಾಗುತ್ತದೆ. ಹೆಸರೇ ಹೇಳುವಂತೆ ಇದು ದಶಮಿ - ಹತ್ತನೆಯ ದಿನ ಅಂದರೆ ದಸರಾ ಉತ್ಸವದ ಹತ್ತನೆಯ ದಿನ. 'ದಶ ಅಹರ್' -> ದಶಹರ -> ದಶರಾ -> ದಸರಾ ಎಂದೇ ಪ್ರಸಿದ್ಧವಾಗಿರುವ ಶಕ್ತಿಪೂಜೆಯ ಶರನ್ನವರಾತ್ರಿಗಳ ನಂತರದ ವಿಜಯೋತ್ಸವದ ದಿನ. ಚಾಂದ್ರಮಾನ ರೀತಿಯಲ್ಲಿ ಹೇಳುವುದಾದರೆ ಶರದೃತುವಿನ ಆಶ್ವಯುಜ ಮಾಸ ಶುಕ್ಲಪಕ್ಷದ ಹತ್ತನೆಯ ದಿನ. 'ದಶಹರ'ದಂದು ದಶಕಂಠ ರಾವಣನನ್ನು ಶ್ರೀರಾಮನು ಸಂಹರಿಸಿದ ವಿಜಯೋತ್ಸವವೆಂದೂ ಪ್ರತೀತಿಯಿದೆ. ಉತ್ತರಭಾರತದ ಕೆಲವೆಡೆ ಈ ದಿನವನ್ನು ಹೊಸವರ್ಷದ ದಿನವೆಂದು ಆಚರಿಸುವ ಪದ್ಧತಿಯೂ ಇದೆ."@kn . "ಕೂಡ್ಲಿ (ಕೂಡಲಿ) ಶಿವಮೊಗ್ಗ ಜಿಲ್ಲೆಯ ಒಂದು ಪುಟ್ಟ ಊರು. ಈ ಊರು ಭಾರತ ದೇಶದ ಕರ್ನಾಟಕ ರಾಜ್ಯಕ್ಕೆ ಸೇರುತ್ತದೆ.ತುಂಗಾ ಮತ್ತು ಭದ್ರಾ - ನದಿಗಳು, ಬೇರೆ ಬೇರೆಯಾಗಿ ಉಗಮಿಸಿ, ಕೂಡ್ಲಿ (ಕೂಡಲಿ) ಎಂಬಲ್ಲಿ ಈ ಜೀವನದಿಗಳ ಸಂಗಮವಾಗುತ್ತವೆ. ಈ ಊರು ತುಂಗಭದ್ರಾ ನದಿಗೆ ಜನ್ಮ ನೀಡುವ ಸ್ಥಳ."@kn . "ಕನ್ನಡ ಅಕ್ಷರಮಾಲೆಯು ಬ್ರಾಹ್ಮಿ ಲಿಪಿಯಿಂದ ಬೆಳೆದು ಬಂದಿದೆ. ಇದನ್ನು ಸ್ವರಗಳು, ಅನುಸ್ವಾರ, ವಿಸರ್ಗ, ವ್ಯಂಜನಗಳು, ಅವರ್ಗೀಯ ವ್ಯಂಜನಗಳೆಂದು ವಿಭಾಗಿಸಲಾಗಿದೆ. ಕನ್ನಡ ಅಕ್ಷರಮಾಲೆಯನ್ನು ಕನ್ನಡ ವರ್ಣಮಾಲೆಯೆಂದೂ ಕರೆಯಲಾಗುತ್ತದೆ."@kn . "'Bold textಟಿಪ್ಪು ಸಾಹಿಬ್ ಎಂದೂ ಕರೆಯಲ್ಪಡುತ್ತಿದ್ದ ಟೀಪು ಸುಲ್ತಾನ್ (೧೭೫೩ - ಮೇ ೪, ೧೭೯೯), ೧೭೮೨ ರಿಂದ ಮೈಸೂರು ಸಂಸ್ಥಾನದ ರಾಜ, ಹಾಗೂ ಭಾರತದಲ್ಲಿ ಬ್ರಿಟೀಷ್ ಸಾಮ್ರಾಜ್ಯಶಾಹಿಯ ವಿರುದ್ಧ ಆಗಿನ ಕಾಲದ ಪ್ರಮುಖ ಹೋರಾಟಗಾರರಲ್ಲಿ ಒಬ್ಬ. ಈ ಹೋರಾಟದ ಪರಿಣಾಮವಾಗಿ ಟೀಪುವಿಗೆ ಶೇರ್-ಎ-ಮೈಸೂರ್ (ಮೈಸೂರ ಹುಲಿ) ಎಂಬ ಬಿರುದು ಉಂಟು.ಟೀಪು ಸೇನಾ ತಂತ್ರಗಳನ್ನು ತನ್ನ ತಂದೆ, ಹೈದರಾಲಿಯೊಂದಿಗೆ ಇದ್ದ ಫ್ರೆಂಚ್ ಅಧಿಕಾರಿಗಳಿಂದ ಪಡೆದನು. ೧೭೬೭ ರ ಕರ್ನಾಟಕ ಯುದ್ಧದಲ್ಲಿ ಒಂದು ಅಶ್ವದಳದ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದನು. ಸೇನಾನಾಯಕನಾಗಿ ಟೀಪು ಪ್ರಸಿದ್ದಿ ಪಡೆದದ್ದು ೧೭೭೫-೭೯ ರ ಆಂಗ್ಲೋ-ಮರಾಠಾ ಯುದ್ಧದಲ್ಲಿ."@kn . "ಭಾರತದ ರಾಷ್ಟ್ರಗೀತೆ - ನೊಬೆಲ್ ಪ್ರಶಸ್ತಿ ವಿಜೇತ ಕವಿ ರವೀಂದ್ರನಾಥ ಠಾಗೋರ್ ಬರೆದ ಗೀತೆ.ಅವರು ಸಂಸ್ಕೃತ ಮಿಶ್ರಿತ ಬಂಗಾಳಿಯಲ್ಲಿಬರೆದ ಬ್ರಹ್ಮೋ ಮಂತ್ರದ ಮೊದಲ ೫ ಪ್ಯಾರಾಗಳನ್ನೇ ನಾವೀಗ ಹಾಡುತ್ತಿರುವುದು..ಈ ಗೀತೆಯನ್ನು ಜನವರಿ ೨೪,೧೯೫೦ರಲ್ಲಿ ಭಾರತ ಸರಕಾರವು ರಾಷ್ಟ್ರಗೀತೆ ಎಂದು ಘೋಷಿಸಿತು,ಇದಕ್ಕೆ ಸಂಗೀತ ಅಳವಡಿಸಿದ್ದು ರಾಮ್ ಸಿಂಗ್ ರಾಕೂರ್."@kn . "ಪ್ರೊ|| ಜಿ ವೆಂಕಟಸುಬ್ಬಯ್ಯ ಕನ್ನಡದ ಏಳಿಗೆಗಾಗಿ ದುಡಿದವರು, ದುಡಿಯುತ್ತಿರುವವರು. ಬೆಂಗಳೂರಿನ ಇವರು ಕನ್ನಡದ ನಿಘಂಟುಶಾಸ್ತ್ರ, ಪ್ರಾಚೀನ ಸಾಹಿತ್ಯ ಅಧ್ಯಯನ, ಅನುವಾದ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ. ಇವರ 'ಇಗೋ ಕನ್ನಡ' ಎಂಬ ಪ್ರಜಾವಾಣಿ ಅಂಕಣ ಸಮಸ್ತ ಕನ್ನಡಿಗರಿಗೆ ಪರಿಚಿತವಾಗಿರುವ ಅಂಕಣ. ೧೯೯೧ ರಿಂದ ತೊಡಗಿ ವೆಂಕಟಸುಬ್ಬಯ್ಯನವರು ಈ ಅಂಕಣದ ಮೂಲಕ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ."@kn . "ಪ್ರಜಾವಾಣಿ ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳಲ್ಲಿ ಒಂದು. ಕರ್ನಾಟಕದ ದಕ್ಷಿಣ ಜಿಲ್ಲೆಗಳಲ್ಲಿ ಈ ಪತ್ರಿಕೆ ಬಹಳವಾಗಿ ಜನಪ್ರಿಯ. 'ಪದ ಸಂಪದ', 'ಚಿನಕುರಳಿ' ಮುಂತಾದ ಜನಪ್ರಿಯ ಕಾಲಂ/ವ್ಯಂಗ್ಯಚಿತ್ರಗಳು ಈ ಪತ್ರಿಕೆಯನ್ನು ವಿಶಿಷ್ಟಗೊಳಿಸಿದವು.ಪ್ರಜಾವಾಣಿಯಲ್ಲಿ ಪ್ರಚಲಿತ ರಾಜಕೀಯ,ಆರ್ಥಿಕ ವಿಷಯಗಳನ್ನು ರಾಷ್ಟ್ರೀಯ ಹಾಗೂ ಅಂತರ್ರಾಷ್ತ್ರೀಯ ಮಟ್ಟದಲ್ಲಿ ಚರ್ಚಿಸಲಾಗುತ್ತದೆ."@kn . "ಕೂಸೆ ಮುನಿಸ್ವಾಮಿ ವೀರಪ್ಪನ್ (ಜನವರಿ ೧೮, ೧೯೫೨ - ಅಕ್ಟೋಬರ್ ೧೮, ೨೦೦೪) - ಭಾರತದ ಕುಖ್ಯಾತ ದಂತಚೋರ, ನರಹಂತಕ. ತಮಿಳುನಾಡು ಹಾಗೂ ಕರ್ನಾಟಕದ ಮಧ್ಯೆ ಇರುವ ಸುಮಾರು ೬,೦೦೦ ಚದುರ ಕಿ.ಮೀ. ಕಾಡಿನಲ್ಲಿ ಜೀವನಪರ್ಯಂತ ವಾಸಿಸಿದ ಇವನು, ಅಲ್ಲಿಯೇ ತನ್ನ ಕಾರುಬಾರು ನೆಡೆಸುತ್ತಿದ್ದ. ಸುಮಾರು ೧೨೦ಕ್ಕೂ ಹೆಚ್ಚು ಜನರ ಕೊಲೆಗೆ ಕಾರಣವಾಗಿದ್ದ ಇವನು ಪೋಲಿಸರ ಕಣ್ಣಿಗೆ ಚಳ್ಳೆ ಹಣ್ಣು ತಿನ್ನಿಸುತ್ತಾ ಕಾಡಿನಲ್ಲಿದ್ದ ಆನೆಗಳ ಹತ್ಯೆ ಮಾಡುತ್ತಾ, ದಂತವನ್ನು, ಹಾಗೂ ಶ್ರೀಗಂಧವನ್ನು ಅಕ್ರಮವಾಗಿ ಸಾಗಿಸುತ್ತಿದ್ದನು. ಇವನ ತಲೆಯ ಮೇಲೆ ಸುಮಾರು ೫ ಕೋಟಿ ಬಹುಮಾನವಿದ್ದರೂ ೨೦ ವರ್ಷಗಳವರೆಗೂ ಪೋಲೀಸರ ಕೈಗೆ ಸಿಕ್ಕದೆ ಹೋದನು."@kn . "ಕನ್ನಡಕ್ಕೆ ವಿಕಿಮೀಡಿಯಾದ ತ್ರೈಮಾಸಿಕ ಸುದ್ದಿ ಪತ್ರವನ್ನು ಅನುವಾದಿಸಲಾಗುತ್ತಿದೆ. ಅನುವಾದ ಮಾಡಲು ಉತ್ಸಾಹ ಇರುವವರು ಈ ಪುಟವನ್ನು ವೀಕ್ಷಿಸಿರಿ. ಕನ್ನಡ ವಿಕಿಪೀಡಿಯಾಕ್ಕೆ ನಿರ್ವಾಹಕರಾಗುವ ಬಗ್ಗೆ ಮನವಿ ಸಲ್ಲಿಸಲು ವಿಕಿಪೀಡಿಯ:ನಿರ್ವಾಹಕ ಮನವಿ ಪುಟವನ್ನು ನೋಡಿ. ಪ್ರಚಲಿತ ಸುದ್ದಿಗಳನ್ನು ಸಂಪಾದಿಸಲು ಉತ್ಸಾಹವಿರುವವರು ಈ ಪುಟದ ಚರ್ಚೆ ಕಾಲಂನಲ್ಲಿ ಸಂದೇಶ ಬಿಡಬಹುದು. ಆಯ್ದ ದಿನಗಳ, ಪ್ರಮುಖ ದಿನಗಳ ಪಟ್ಟಿಯನ್ನು ತಯಾರಿಸುತ್ತಿದ್ದೇವೆ. ಉತ್ಸಾಹ್ವಿರುವವರು ಇದರ ಮೇಲ್ವಿಚಾರಣೆವಹಿಸಿಕೊಳ್ಳಲು ಮುಂದೆ ಬರಬಹುದು."@kn . "ಹಂಪೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಬಳಿ ಇರುವ ಈ ಊರು, ೧೩೩೬ರಿಂದ ೧೫೬೫ರವರೆಗೆ ಇದು ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆಗಿತ್ತು. ಹಂಪೆಯ ಮೊದಲನೆ ಹೆಸರು 'ಪಂಪ' ಎಂದಿತ್ತು, ಅಂದರೆ ತುಂಗಭದ್ರ ನದಿ ಎಂದರ್ಥ. ವರ್ಷಗಳು ಕಳೆದಂತೆ ಇದು 'ವಿಜಯನಗರ' ಮತ್ತು 'ವಿರುಪಾಕ್ಷಪುರ' ಎಂದು ಕರೆಯಲ್ಪಟ್ಟಿತು. ಹಂಪೆಯನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಘೋಷಿಸಿದೆ.ವಿಜಯನಗರ ಸಾಮ್ರಾಜ್ಯದ ಅತೀ ಯಶಸ್ವಿ ಒಡೆಯನಾದ ಕೃಷ್ಣದೇವರಾಯನ ಕಾಲದಲ್ಲಿ ಹಂಪೆ ಬಜಾರ್ ಎಂದೆನ್ನಿಸಿ ಕೊಂಡ ಬೀದಿಯಲ್ಲಿ ವಜ್ರಾಭರಣಗಳನ್ನು ತೂಕದ ಮಾದರಿಯಲ್ಲಿ ಮಾರಲ್ಪಡುತ್ತಿದ್ದರಂತೆ."@kn . "ಕುಮಾರವ್ಯಾಸ ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬ. ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬ ಎಂದರೆ ತಪ್ಪಾಗಲಾರದು. ಕುಮಾರವ್ಯಾಸನ ಮೂಲ ಹೆಸರು ನಾರಣಪ್ಪ. \"ಗದುಗಿನ ನಾರಣಪ್ಪ\" ಎಂದು ಸಾಮಾನ್ಯವಾಗಿ ಕುಮಾರವ್ಯಾಸನನ್ನು ಗುರುತಿಸಲಾಗುತ್ತದೆ. ಈತನ ಕಾವ್ಯ ನಾಮ ಕುಮಾರವ್ಯಾಸ. ವ್ಯಾಸ ಮಹಾಕವಿಯ ಸಂಸ್ಕೃತ ಮಹಾಭಾರತದ ಅತ್ಯದ್ಭುತ ಕನ್ನಡ ರೂಪವನ್ನು ರಚಿಸಿದ್ದರಿಂದ ಈ ಹೆಸರು ಕುಮಾರವ್ಯಾಸನಿಗೆ ಅನ್ವರ್ಥವಾಗಿದೆ. ಕುಮಾರವ್ಯಾಸ ಈ ಕಂಬದ ಅಡಿಯಲ್ಲೇ ಗದುಗಿನ ಭಾರತವನ್ನು ರಚಿಸಿ ಓದುತ್ತಿದ್ದ ಎಂಬ ಪ್ರತೀತಿ ಸಹ ಇದೆ. ಈ ವಿಚಾರದಲ್ಲಿ ಹೆಚ್ಚಿನ ಸಂಶೋಧನೆ ಆಗಿದ್ದು ಅದಕ್ಕೆ ಕುಮಾರವ್ಯಾಸನ ಕಾಲ ಮತ್ತು ವಂಶಾವಳಿ ನೋಡಿ"@kn . "ಚಕ್ರವರ್ತಿ ಎಂದರೆ ಸಾರ್ವಭೌಮ, ಸಾಮ್ರಾಟ. ಒಂದು ರಾಜ್ಯದ ಅಧಿಪತಿ ರಾಜನೆನಿಸಿಕೊಂಡರೆ, ಅಂತಹ ರಾಜರುಗಳಿಗೆ ಅಧಿಪತಿಯಾದ ರಾಜಾಧಿರಾಜನಿಗೆ ಚಕ್ರವರ್ತಿ ಎಂದು ಕರೆಯಲಾಗುತ್ತಿತ್ತು. ಚಕ್ರವರ್ತಿ ಎನ್ನುವುದು ಪ್ರಾಚೀನ ಕಾಲದ ರಾಜರನ್ನುದ್ದೇಶಿಸಿ ಕೊಡುತ್ತಿದ್ದ ಬಿರುದು. ಬಹಳವಾಗಿ ದಂಡಯಾತ್ರೆಗಳಲ್ಲಿ ಯಶಸ್ವಿಯಾಗಿ ಹಲವು ಪ್ರಾಂತ್ಯಗಳನ್ನು ಗೆದ್ದು, ಏಕಚಕ್ರಾಧಿಪತ್ಯಕ್ಕೆ ಒಳಪಡಿಸುತ್ತಿದ್ದ, ಒಟ್ಟುಗೂಡಿಸುತ್ತಿದ್ದ ರಾಜರಿಗೆ ಸಾಮಾನ್ಯವಾಗಿ ಚಕ್ರವರ್ತಿ ಎಂದು ಹೆಸರಿಸಿ ಕರೆಯುವುದುಂಟು."@kn . "ಚಾಲುಕ್ಯ ವಂಶ ದಕ್ಷಿಣ ಭಾರತದಲ್ಲಿ ಕ್ರಿ.ಶ. ೫೫೦ ರಿಂದ ೭೫೦ ಮತ್ತು ಕ್ರಿ.ಶ. ೯೭೩ ರಿಂದ ೧೧೯೦ ರ ವರೆಗೆ ಅಸ್ತಿತ್ವದಲ್ಲಿದ್ದ ರಾಜವಂಶ."@kn . "ತುಂಗಾ ನದಿ ಭಾರತದ ಕರ್ನಾಟಕ ರಾಜ್ಯದ ಒಂದು ನದಿ. ತುಂಗಾ ನದಿ ಪಶ್ಚಿಮ ಘಟ್ಟಗಳ ವರಾಹ ಪರ್ವತದಲ್ಲಿರುವ ಗಂಗಾ ಮೂಲದಲ್ಲಿ ಹುಟ್ಟುತ್ತದೆ. ಅಲ್ಲಿಂದ ಇದು ಕರ್ನಾಟಕದ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಮೂಲಕ ಹರಿಯುತ್ತದೆ. ಸುಮಾರು 147 ಕಿಮೀ ದೂರದವರೆದೆ ಹರಿದು ಶಿವಮೊಗ್ಗ ಜಿಲ್ಲೆಯ ಕೂಡ್ಲಿಯಲ್ಲಿ ಭದ್ರಾ ನದಿಯೊಂದಿಗೆ ಸಂಗಮಗೊಳ್ಳುತ್ತದೆ. ಇದರ ನಂತರ ತುಂಗಭದ್ರಾ ಎಂಬ ಹೆಸರು ಪಡೆದು ಮುಂದೆ ಆಂಧ್ರ ಪ್ರದೇಶದಲ್ಲಿ ಕೃಷ್ಣಾ ನದಿಯನ್ನು ಸೇರುತ್ತದೆ. ತುಂಗಾ ನದಿ ಸಿಹಿನೀರಿಗೆ ಪ್ರಸಿದ್ಧ. \"ತುಂಗಾ ಪಾನಂ ಗಂಗಾ ಸ್ನಾನಂ\" ಎಂಬ ಗಾದೆಯೇ ಇದೆ!ತುಂಗಾ ನದಿಗೆ ಗಾಜನೂರಿನಲ್ಲಿ ಒಂದು ಅಣೆಕಟ್ಟನ್ನು ಕಟ್ಟಲಾಗಿದೆ."@kn . "ಗಂಗ್ನಿಹೆಸ್ಸೊ - ಸಾಂಪ್ರದಾಯಿಕ \"ದಹೊಮಿಯ ಹನ್ನೆರಡು ರಾಜರು\" ಗಳಲ್ಲಿ ಮೊದಲನೆಯವ. ಇವನ ರಾಜ್ಯಭಾರ ಸುಮಾರು ೧೬೨೦ರಲ್ಲಿ ನಡೆದಿರಬಹುದು.